Home
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ವಿ ಸದಾನಂದ ಗೌಡರವರು ದಿನಾಂಕ 24-01-2012ರಂದು ದೇವನಹಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಮಿನಿ ವಿಧಾನಸೌಧ ಕಟ್ಟಡ ಹಾಗೂ ವಿವಿಧ ಇಲಾಖೆಗಳ ಕಾಮಾಗಾರಿಗಳ ಶಂಕುಸ್ಥಾಪನ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಪುರಸಭೆ ಅದ್ಯಕ್ಷರಾದ ಶ್ರೀಮತಿ ರತ್ನಮ್ಮ ಗಾರೆ ರವಿಕುಮಾರ್,ಸ್ಥಾಯಿ ಸಮಿತಿ ಅದ್ಯಕ್ಷರಾದ ಶ್ರೀ ವಿ.ಹನುಮಂತಪ್ಪ ಹಾಗೂ ಮುಖ್ಯಾಧಿಕಾರಿ ಶ್ರೀಮತಿ ಬಿ.ಎಸ್ ಸುಮ ರವರು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ "ಪೌರಸನ್ಮಾನ" ಮಾಡಿ ಪುರಸಭೆಯ ಅಭಿವೃದ್ದಿ ಕಾಮಾಗಾರಿಗಳಿಗೆ "ಮನವಿ ಪತ್ರವನ್ನು" ನೀಡಿದರು
ಏಪ್ರಿಲ್ 2 ರಿಂದ ರಾಜ್ಯಾದ್ಯಂತ ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಕಾಯಿದೆ - 2011 ಜಾರಿಗೆ ಬರಲಿದೆ. ದಿನಾಂಕ 02/04/2012 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ.ಡಿ.ವಿ.ಸದಾನಂದ ಗೌಡ ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚಾಲನೆ ನೀಡುವರು.
ಹೆಚ್ಚಿನ ಮಾಹಿತಿಗೆ ಸಕಾಲ - ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಕಾಯಿದೆ - 2011
ದೇವನಹಳ್ಳಿ ಪುರಸಭೆಯಲ್ಲಿ ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರಿನ ಅಭಾವವನ್ನು ನೀಗಿಸುವ ಕುರಿತು ಇಬ್ಬರು ನೂಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
1).ಶ್ರೀಮತಿ ಆಶಾ ಸಹಾಯಕ ಅಭಿಯಂತರರು ಮೊಬೈಲ್ ಸಂಖ್ಯೆ: 9731124750
2) ಶ್ರೀ ಸಿ.ಎಂ ಚಂದ್ರಶೇಖರ್ ಕಿರಿಯ ಅಭಿಯಂತರರು ಮೊಬೈಲ್ ಸಂಖ್ಯೆ: 98868478
Devanahalli Town Profile
ದೇವನಹಳ್ಳಿ ಪುರಸಭೆಯು 1938 ರಲ್ಲಿ ಸ್ಥಾಪನೆಯಾಯಿತು. ದೇವನಹಳ್ಳಿ ಪುರಸಭೆಯು ಬೆಂಗಳೂರಿನಿಂದ ಹೈದಾರಬಾದ್ ಗೆ ಹೋಗುವ ಎನ್ಎಚ್-7 ರಸ್ತೆಯಲ್ಲಿದ್ದು ಬೆಂಗಳೂರಿನಿಂದ ಸುಮಾರು 34 ಕೀಲೋಮೀಟರ್ ದೂರದಲ್ಲಿರುತ್ತದೆ. 2001 ರ ಜನಗಣತಿಯ ಪ್ರಕಾರ ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ 23,406 ಜನಸಂಖ್ಯೆಯನ್ನು ಹೊಂದಿರುತ್ತದೆ. ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ. ದೇವನಹಳ್ಳಿ ಪುರಸಭೆಯ ವ್ಯಾಪ್ತಿಯು ಒಟ್ಟು 16.00 ಚದುರ ಕೀಲೋಮೀಟರ್ ಗಳಿರುತ್ತದೆ. ಮೈಸೂರು ಹುಲಿ ಎಂದೆ ಪ್ರಸಿದ್ದಿ ಪಡೆದಿದ್ದ ಟಿಪ್ಪು ಸುಲ್ತಾನರ ಜನ್ಮ ಸ್ಥಳವು ಪುರಸಭೆ ವ್ಯಾಪ್ತಿಯಲ್ಲಿದ್ದು ಈ ಸ್ಥಳವು ಪುರಾತತ್ವ ಇಲಾಖೆಗೆ ಒಳಪಡುತ್ತದೆ. ದೇವನಹಳ್ಳಿ ಯಲ್ಲಿ 1501 ನೇ ಇಸವಿಯ ಪುರಾತನ ಕೋಟೆ ಇದ್ದು, ಇದು ಸಹ ಪುರಾತತ್ವ ಇಲಾಖೆಗೆ ಒಳಪಡುತ್ತದೆ. ಪ್ರವಾಸ ತಾಣವೆಂದೆ ಪ್ರಸಿದ್ದಿ ಪಡೆದ ನಂದಿಬೆಟ್ಟವು ಸುಮಾರು 20 ಕೀಲೋಮೀಟರ್ ದೂರದಲ್ಲಿರುತ್ತದೆ. ಬೆಂಗಳೂರು ಅಂತರ್ ರಾಷ್ಷೀಯ ವಿಮಾನ ನಿಲ್ದಾಣವು ದೇವನಹಳ್ಳಿಯಿಂದ 6.5 ಕೀಲೋಮೀಟರ್ ದೂರದಲ್ಲಿರುತ್ತದೆ. ದೇವನಹಳ್ಳಿಯಲ್ಲಿ ಹಾರ್ಡ್ ವೇರ್ ಪಾರ್ಕ್ ನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ . ದೇವನಹಳ್ಳಿಯಲ್ಲಿ ಪ್ರಸಿದ್ದವಾದ ಪುರಾತನ ಕಾಲದ ವೇಣುಗೋಪಾಲ ಸ್ವಾಮಿ ದೇವಸ್ಥಾನವಿದ್ದು ಈ ದೇವಾಲಯದ ಒಡವೆಗಳು ಕೋಟ್ಯಾಂತರ ಬೆಲೆ ಬಾಳುವಂತಹದಾಗಿರುತ್ತದೆ. ಹಾಗೂ ವರ್ಷಕೊಮ್ಮೆ ನಡೆಯುವ ಜಾತ್ರೆ ಸಮಯದಲ್ಲಿ ಈ ದೇವರನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ.
The Town Municipal Council (TMC) Devanahalli was constituted in 1938. It is situated along Bangalore - Hyderabad National Highway No.7 at a distance of 34 Kms from Bangalore. Devanahalli town is a historic place where 'Tiger of Mysore' Tippu sultan was born, the birth place now comes under archeological department. The Devanahalli fort now comes under the archeological department.The Town has the famous Venugopal swamy temple having jewellary which is said to be worth in crores.The Nandi hills stands at 20 Kms North-West of the Town. The new international airport is just 6.5 kms from the Town. There is a proposal for development of a hardware park near Devanahalli. It has a population of 23,406 as per census 2001. The TMC has 23 wards and equal number of councilors and 5 Numbers of Nominee Councilors. Devanahalli TMC stretches to an area of 16.50 Sq Kms.
ಗಣಕೀಕರಣ : ದೇವನಹಳ್ಳಿ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ
Computerisation : Properties within Devanahalli TMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1998. Citizens can make use of this facility to register & obtain Birth & Death Certificates.
This page is last updated on
dd-mm-YYYY
The contents of this page are maintained by
Chief officer, Devanahalli TMC


